

8th November 2024

ಮಲ್ಲಮ್ಮ ನುಡಿ ವಾರ್ತೆ
ರಾಮನಗರ : ರಾಜ್ಯ ಸರ್ಕಾರ ತೊಲಗುವವರೆಗೆ, ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಹೋರಾಡುವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ರಾಂಪುರ ಗ್ರಾಮದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನನಗೆ ಈಗ ವಯಸ್ಸು ೯೨ ಆಗಿದೆ.
ಹಾಗೆಂದ ಮಾತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಗೆದ್ದ ಬಳಿಕ ನಾನು ಮನೆಯಲ್ಲಿ ಮಲಗುತ್ತೇನೆ ಎಂದರ್ಥವಲ್ಲ. ಹಲವು ಹಗರಣಗಲ್ಲಿ ಮುಳುಗಿರುವ ಇಂತಹ ಕೆಟ್ಟ ಸರ್ಕಾರ ತೆಗೆಯುವವರೆಗೂ ನಾನು ವಿರಮಿಸಲ್ಲ. ನನ್ನ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಶಪಥ ಮಾಡಿದರು.
ಪ್
ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸುತ್ತಲೇ ಮಾತು ಮುಂದುವರಿಸಿದ ಗೌಡರು, ಇಂಡಿಯಾ ಮೈತ್ರಿಕೂಟದಲ್ಲಿ ಮೋದಿ ಅವರಿಗೆ ಸಮಾನವಾದ ಒಬ್ಬ ನಾಯಕ ಇಲ್ಲ. ಆ ಕಾರಣಕ್ಕೆ ಪ್ರಾದೇಶಿಕ ಪಕ್ಷವಾದ ನಮ್ಮ ಜೆಡಿಎಸ್ ಎನ್ಡಿಎ ಸೇರಿದೆ ಎಂದು ಹೇಳಿದರು.

ಪತ್ರಕರ್ತರಿಗೆ ಅಗೌರವ ತೋರಿದ ಮಾಜಿ ಶಾಸಕ ಡಿ.ಜಿ. ಪಾಟೀಲ ಹೇಳಿಕೆ ಖಂಡಿಸಿ ಬಹಿರಂಗ ಕ್ಷಮೆಗೆ ಆಗ್ರಹ

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಿವಶರಣಪ್ಪಗೌಡ್ರ ಪಾಟೀಲ್ ನಿಧನ.